ಎಣ್ಣೆಮರ ಲೆಗ್ಯುಮಿನೋಸಿ ಕುಟುಂಬದ (ಫ್ಯಾಮಿಲಿ) ಒಂದು ಮರ.ಇದು ಅಳಿವಿನಂಚಿನಲ್ಲಿರುವ ಪ್ರಬೇಧವಾಗಿದೆ. == ವೈಜ್ಞಾನಿಕ ನಾಮ == ಇದರ ವೈಜ್ಞಾನಿಕ ನಾಮ ಹಾರ್ಡ್‍ವಿಕಿಯ ಪಿನ್ನೇಟ.ಕಿಂಗಿಯೋಡೆಂಡ್ರಾನ್ ಪಿನ್ನಾಟಂ ಎಂಬುದು ಪರ್ಯಾಯ ನಾಮ. ವ್ಯಾಪಾರನಾಮ ಪಿನ್ನೆ. == ಲಕ್ಷಣಗಳು == ನಿತ್ಯಹರಿದ್ವರ್ಣದ ದೊಡ್ಡ ಜಾತಿ ಮರ. ಎತ್ತರ 300 ಮೀಟರಷ್ಟು ಆಗಬಹುದು ; ಸುತ್ತಳತೆ 4 ಮೀಟರ್ ಹೊಳಪು ಎಲೆಗಳು ದಕ್ಷಿಣ ಕನ್ನಡ, ಕೊಡಗಿನ ಕಾಡುಗಳಲ್ಲಿ ವಿಶೇಷವಾಗಿದೆ. ಚೌಬೀನೆಯಲ್ಲಿ ಮಾಸಲು ಬಿಳುಪಿನ ಬಿಳಿಮರ ಹೆಚ್ಚು. ಕಬ್ಬಿನ ಮರ ಕಂದುಗೆಂಪು. ಇದರಲ್ಲಿ ಒಂದು ಬಗೆಯ ತೈಲರಾಳ ಇದೆ. ಬಿಳಿಮರ ಬಾಳಿಕೆ ಬರುವುದಿಲ್ಲ. ರಕ್ಷಕ ಸಂಸ್ಕರಣೆಯಿಂದ ಮರದ ಬಾಳಿಕೆ ಏರುತ್ತದೆ; ಕೆಚ್ಚು ಚೆನ್ನಾಗಿ ಹದಗೊಳ್ಳುವುದು ಹಾಗೂ ಬಾಳಿಕೆ ಬರುವುದು. == ಉಪಯೋಗಗಳು == ಮರ ಸಾಕಷ್ಟು ಗಡಸು ಮತ್ತು ಗಟ್ಟಿ ಮರಗೆಲಸ ಸುಲಭ. ತೊಲೆ, ತೇರು, ಹೆಂಚು ಹಲಗೆ, ನೆಲಹಲಗೆ ಮತ್ತು ಪೀಠೋಪಕರಣಗಳಿಗೆ ಉಪಯುಕ್ತವಾದುದು. ಕಡೆತದ ಕೆಲಸಗಳಿಗೂ ಬರುತ್ತದೆ. ಆರಿಸಿದ ಚೌಬೀನೆ ಬೀರು ಇತ್ಯಾದಿ ಅಂದದ ಉಪಕರಣಗಳಿಗೂ ಉಪಯುಕ್ತ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == , 1998. 2007-09-30 ವೇಬ್ಯಾಕ್ ಮೆಷಿನ್ ನಲ್ಲಿ.. 2006 . 19 2007. ://..///1405511/Biochemical_activity_of_endangered_medicinal_plant_Kingiodendron_pinnatum